ಮೈಸೂರಿನ ಜನರೇ ಎಚ್ಚರ ಎಚ್ಚರ..! ಇದು AI ಕಾಲ.

ಜನಜಾಗೃತಿ ವಾಯ್ಸ್ : ಮೈಸೂರಿನ ಜನರೇ ಎಚ್ಚರ ಎಚ್ಚರ..! ಇದು AI ಕಾಲ.. ಫೇಕ್ ಫೋಟೋ ವಿಡಿಯೋಗಳಿಗೆ ಅಂಜದಿರಿ ಇದು “ಜನಜಾಗೃತಿ ವಾಯ್ಸ್” ಅಭಿಯಾನ.

ಇತ್ತೀಚೆಗೆ ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್‌ಶಾಪ್ ಬಳಿಯ ಮರದ ಮೇಲೆ ಚಿರತೆ ಕುಳಿತಿರುವಂತೆ ಕಾಣುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿದ ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿತ್ತು.

ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಇದು AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಫೇಕ್ ಫೋಟೋ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯ ಇನ್ನೂ ಎರಡು–ಮೂರು ನಕಲಿ ಚಿರತೆ ಫೋಟೋಗಳು ವೈರಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರಿನ ಜಯನಗರ, ಚಿಕ್ಕಹರದನಹಳ್ಳಿ, ಪಂಪಾಪತಿ ರಸ್ತೆ ಭಾಗಗಳಲ್ಲಿ ಸಂಜೆ 6 ಗಂಟೆಯ ನಂತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆರಂಭದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಅದರಂತೆ ವ್ಯಾಪಾರಸ್ಥರು ಬೇಗ ಅಂಗಡಿಗಳನ್ನು ಮುಚ್ಚಿ ಮನೆಗಳಿಗೆ ತೆರಳುತ್ತಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ಫೇಕ್ ಫೋಟೋಗಳನ್ನು ಹರಡುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ದೃಶ್ಯವನ್ನು ನಂಬುವ ಮೊದಲು ಪರಿಶೀಲಿಸಿ, ಪಾನಿಕ್ ಆಗದಂತೆ ಜಾಗೃತಿ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *