ಮನೆ ಬಾಡಿಗೆ ನೀಡುವವರಿಗೆ ಪೊಲೀಸರಿಂದ ವಾರ್ನ್: ಇನ್ಮುಂದೆ ಈ ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕಂತೆ.!

ಜನಜಾಗೃತಿ ವಾಯ್ಸ್ ಬೆಂಗಳೂರು : ಇನ್ಮುಂದೆ ಮನೆ ಮಾಲೀಕರು ಬಾಡಿಗೆಗೆ ಮನೆ ನೀಡುವಾಗ ಕೆಲವೊಂದು ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು,ಇಲ್ಲವಾದಲ್ಲಿ ಕ್ರಮದ ಬಗ್ಗೆ ಪೊಲೀಸರು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ (House Rent) ನೀಡುವ ಮುನ್ನ ಮಾಲೀಕರು (Owner) ಭಾರೀ ಹುಷಾರಾಗಿರಬೇಕು, ಅದರಲ್ಲೂ ವಿದೇಶಿ ಪ್ರಜೆಗಳಿಗೆ (Foriegners) ಮನೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ, ಮನೆ ಬಾಡಿಗೆಗೆ ನೀಡುವ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯಗೊಳಿಸಲಾಗಿದೆ, ಈ ನಿಯಮವನ್ನು ಪಾಲಿಸದೇ ಮನೆ ಬಾಡಿಗೆ ನೀಡಿದರೆ ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈಶಾನ್ಯ ವಿಭಾಗದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *