ಅಡುಗೆ ಅನಿಲ ಸಮಸ್ಯೆ!

ಜನಜಾಗೃತಿ ವಾಯ್ಸ್ : “ಅಡುಗೆ ಅನಿಲ ಸಮಸ್ಯೆ ಹೋಟೆಲ್, ಬೇಕರಿ ಉದ್ಯಮಗಳು ಸಂಕಷ್ಟದಲ್ಲಿ ತಕ್ಷಣ ಕ್ರಮಕ್ಕೆ ಒತ್ತಾಯ”

ಬೆಂಗಳೂರು, ದಿನಾಂಕ: 23 ಮಾರ್ಚ್ 2026 ಕರ್ನಾಟಕ ರಾಜ್ಯದಲ್ಲಿ ಬೇಕರಿ, ಕಾಂಡಿಮೆಂಟ್ಸ್ ಮತ್ತು ಹೋಟೆಲ್ ಉದ್ಯಮಗಳಿಗೆ ವಾಣಿಜ್ಯ ಅಡುಗೆ ಅನಿಲ (Commercial LPG) ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದೆ ಗಂಭೀರ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ಹೋಟೆಲ್ ಹಾಗೂ ಬೇಕರಿ ಘಟಕಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಉದ್ಯಮಿದಾರರು ಹಾಗೂ ಸಾವಿರಾರು ಕಾರ್ಮಿಕರು ಜೀವನೋಪಾಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಅಡುಗೆ ಅನಿಲ ಪೂರೈಕೆಯನ್ನು ಸರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷರಾದ ರವಿ ಶೆಟ್ಟಿ ಬೈಂದೂರು, ಆಗ್ರಹಿಸಿದ್ದಾರೆ,

“ತೆರಿಗೆ ಪಾವತಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಹೋಟೆಲ್, ಬೇಕರಿ ಮತ್ತು ಕಾಂಡಿಮೆಂಟ್ಸ್ ಉದ್ಯಮಗಳನ್ನು ನಿರ್ಲಕ್ಷ್ಯ ಮಾಡುವುದನ್ನು ನಾವು ಸಹಿಸಲು ಸಾಧ್ಯವಿಲ್ಲ. ಈ ಉದ್ಯಮಗಳನ್ನು ಅವಲಂಬಿಸಿ ಬದುಕುತ್ತಿರುವ ಕಾರ್ಮಿಕರ ಜೀವನದೊಂದಿಗೆ ಆಟವಾಡುವುದು ಅನ್ಯಾಯ.” ಎಂದು ಅಭಿಪ್ರಾಯಪಟ್ಟರು.

ಹೋಟೆಲ್ ಮತ್ತು ಕಾಂಡಿಮೆಂಟ್ಸ್‌ಗಳನ್ನು ಅವಲಂಬಿಸಿರುವ ಸಾಮಾನ್ಯ ಜನರ ಆಹಾರ ಪದ್ಧತಿಯ ಮೇಲೂ ಈ ಸಮಸ್ಯೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸರ್ಕಾರವು ತಕ್ಷಣ ಸೂಕ್ತ ಪರಿಹಾರ ಕಂಡುಹಿಡಿದು ಪೂರೈಕೆ ಸರಳಗೊಳಿಸಬೇಕು ಎಂದು ಆಗ್ರಹಿಸಿ 23 ಮಾರ್ಚ್ 2026 ರಂದು ಬೆಳಗ್ಗೆ 11:00ಗೆ ಕಾರ್ಮಿಕ ಪರಿಷತ್ತಿನ ಕೇಂದ್ರ ಕಚೇರಿ ರಾಜಾಜಿನಗರದಲ್ಲಿ ಸೌದಿ ಒಲೆಯಿಂದ ಹಾಲು ಕಾಯಿಸಿ ಜನರಿಗೆ ಹಾಲು ಮತ್ತು ಬ್ರೆಡ್ ಅನ್ನು ನೀಡುವ ವಿನುತನ ಕಾರ್ಯ ಆಯೋಜಿಸಿದ್ದಾರೆ.

Spread the love

Leave a Reply

Your email address will not be published. Required fields are marked *