ಮಾಚೋಹಳ್ಳಿ ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯ- ರಾಷ್ಟ್ರ ಪಕ್ಷಿ ನವಿಲು ಸುಟ್ಟು ಹಾಕಿದ್ದಕ್ಕೆ ಸಾರ್ವಜನಿಕರ ಆಕ್ರೋಶ.!?

ಜನಜಾಗೃತಿ ವಾಯ್ಸ್ : ಮಾಚೋಹಳ್ಳಿ ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯ – ರಾಷ್ಟ್ರ ಪಕ್ಷಿ ನವಿಲು ಸುಟ್ಟು ಹಾಕಿದ್ದಕ್ಕೆ ಸಾರ್ವಜನಿಕರ ಆಕ್ರೋಶ.!?

 ಸಾಂದರ್ಭಿಕ ಚಿತ್ರ.

ಬೆಂಗಳೂರು: ಮಾಚೋಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದ (Machohalli Reserve Forest) ವೃಕ್ಷೋದ್ಯಾನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಖರಿ ಈಗ ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ.

ರಾಷ್ಟ್ರಪಕ್ಷಿ ನವಿಲು ಮೃತಪಟ್ಟಾಗ ಅದನ್ನು ಗೌರವಯುತವಾಗಿ ಅಥವಾ ನೈಸರ್ಗಿಕ ನಿಯಮದಂತೆ ವಿಲೇವಾರಿ ಮಾಡುವ ಬದಲಿಗೆ, ಬೆಂಕಿಯಲ್ಲಿ ಸುಟ್ಟು ಹಾಕಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ನಿಯಮ ಉಲ್ಲಂಘನೆ: ಅರಣ್ಯದಲ್ಲಿ ಸತ್ತ ಪ್ರಾಣಿಗಳನ್ನು ನೈಸರ್ಗಿಕವಾಗಿ ಕೊಳೆಯಲು ಬಿಡುವುದು ಆಹಾರ ಸರಪಳಿಯ ನಿಯಮ. ಆದರೆ ಇಲ್ಲಿ ನವಿಲನ್ನು ಸುಡುವ ಮೂಲಕ ನಿಯಮ ಗಾಳಿಗೆ ತೂರಲಾಗಿದೆ.?

ಸಿಬ್ಬಂದಿಗಳ ಉದಾಸೀನತೆ: ಮಾಚೋಹಳ್ಳಿ ವೃಕ್ಷೋದ್ಯಾನದ ನಿರ್ವಹಣೆಯಲ್ಲಿ ಸಿಬ್ಬಂದಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.?

ಸಾರ್ವಜನಿಕರ ಪ್ರತಿರೋಧ: ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ಮತ್ತು ಪ್ರಕೃತಿ ಪ್ರೇಮಿಗಳು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.?

ಸಚಿವರಿಗೆ ಮನವಿ: ಅರಣ್ಯ ಸಚಿವ  ಈಶ್ವರ್ ಖಂಡ್ರೆ ಅವರು ಈ ಕೂಡಲೇ ಈ ವೃಕ್ಷೋದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.?

ನಿಸರ್ಗ ನಿಯಮಕ್ಕೆ ವಿರುದ್ಧವಾದ ನಡೆ: ಪರಿಸರ ವಿಜ್ಞಾನದ ಪ್ರಕಾರ, ಕಾಡಿನಲ್ಲಿ ವನ್ಯಪ್ರಾಣಿಗಳು ಮೃತಪಟ್ಟಾಗ ಅವುಗಳ ದೇಹವು ಇತರ ಕ್ರಿಮಿಕೀಟಗಳು, ಹದ್ದು ಅಥವಾ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರವಾಗಬೇಕು. ಇದು ಕಾಡಿನ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿ. ಆದರೆ ಮಾಚೋಹಳ್ಳಿಯಲ್ಲಿ ಮೃತಪಟ್ಟ ರಾಷ್ಟ್ರ ಪಕ್ಷಿ ನವಿಲನ್ನು ಸಿಬ್ಬಂದಿಗಳು ಗುಟ್ಟಾಗಿ ಬೆಂಕಿಯಲ್ಲಿ ಸುಟ್ಟಿರುವುದು ಅರಣ್ಯ ಇಲಾಖೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.?

ಸಾಂದರ್ಭಿಕ ಚಿತ್ರ

ಸಾರ್ವಜನಿಕರ ಆರೋಪವೇನು?

 “ಇಲ್ಲಿನ ಸಿಬ್ಬಂದಿಗಳು ವೃಕ್ಷೋದ್ಯಾನದ ಸ್ವಚ್ಛತೆ ಮತ್ತು ವನ್ಯಜೀವಿಗಳ ರಕ್ಷಣೆಯ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ. ರಾಷ್ಟ್ರ ಪಕ್ಷಿ ನವಿಲು ಸತ್ತಾಗ ಅದರ ಮರಣೋತ್ತರ ಪರೀಕ್ಷೆ ನಡೆಸುವ ಅಥವಾ ನೈಸರ್ಗಿಕವಾಗಿ ವಿಲೇವಾರಿ ಮಾಡುವ ಬದಲು, ಸಾಕ್ಷ್ಯ ನಾಶ ಮಾಡುವಂತೆ ಸುಟ್ಟು ಹಾಕಿರುವುದು ಸರಿಯಲ್ಲ,” ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.?

ಗುತ್ತಿಗೆ ಆಧಾರದ ಮೇಲೆ ಇರುವ ಮೂರು ಜನ ಸಿಬ್ಬಂದಿಗಳಿಗೆ ಇರಲು ಸೂರಿದ್ದರು ಸುರಕ್ಷತೆ ಇಲ್ಲ.?

ಬೆಂಗಳೂರಿನಲ್ಲಿ ರಾಷ್ಟ್ರ ಪಕ್ಷಿ ನವಿಲನ್ನು ನೋಡುವುದೇ ನಮ್ಮ ಅದೃಷ್ಟ ಅಂತದರಲ್ಲಿ ರಾಷ್ಟ್ರ ಪಕ್ಷಿ ನವಿಲುಗಳಿಗೆ ರಕ್ಷಣೆ ನೀಡದಿದ್ದರೆ ಮುಂದೆ ನವಿಲಿನ ಸಂತತಿಯೇ ನಾಶವಾಗುವುದರಲ್ಲಿ ಸಂಶಯವಿಲ್ಲ? ಇದಕ್ಕೆಲ್ಲ ನೇರ ಹೊಣೆ ಅರಣ್ಯ ಇಲಾಖೆ ಮತ್ತು ಸಿಬ್ಬಂದಿಗಳು.?

ಹರೀಶ್ ಅರಣ್ಯ  ಇಲಾಖೆಯ ಸಿಬ್ಬಂದಿ

 ಪತ್ರಕರ್ತರೊಂದಿಗೆ ಗೂಂಡ ರೀತಿಯ ಉಡಾಫೆ ವರ್ತನೆ: ಈ ಘಟನೆಯ ಬಗ್ಗೆ ಸ್ಪಷ್ಟನೆ ಕೋರಿ ಸ್ಥಳೀಯ ಪತ್ರಕರ್ತರು ಅರಣ್ಯ ಇಲಾಖೆಯ ಸಿಬ್ಬಂದಿ ಹರೀಶ್ ಎಂಬುವವರನ್ನು ಪ್ರಶ್ನಿಸಿದಾಗ, ಅವರು ಜವಾಬ್ದಾರಿಯುತ ಉತ್ತರ ನೀಡುವ ಬದಲು ಅತ್ಯಂತ ಉಡಾಫೆಯಿಂದ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. “ನಮಗೆ ಕೇಳುವವರು ಯಾರೂ ಇಲ್ಲ” “ಇಲ್ಲಿ ನಾನೇ ರಾಜ ನಾನೇ ಮಂತ್ರಿ” ನಿಮ್ಮ ಕೈಲಿ ಏನಾಗುತ್ತೋ ಮಾಡಿಕೊಳ್ಳಿ, ಎಂಬಂತೆ  ವರ್ತಿಸಿರುವ ಸಿಬ್ಬಂದಿಯ ವಿರುದ್ಧ ಪತ್ರಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ ಇಂಥವರಿಂದ ಇಲಾಖೆಗೆ ಕೆಟ್ಟ ಹೆಸರು ಇಂತವರನ್ನು ಇಲಾಖೆಯಿಂದ ವಜಾ ಮಾಡಿ ಮನೆಗೆ ಕಳುಹಿಸಿ ಎಂದು ಜನಜಾಗೃತಿ ವಾಯ್ ಪತ್ರಿಕೆಯ ಆಗ್ರಹ.?!

ಸಚಿವರಿಗೆ ನೇರ ಮನವಿ: ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಅಧಿಕಾರ ವಹಿಸಿಕೊಂಡ ನಂತರ ಅರಣ್ಯ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ, ನಗರದ ಸಮೀಪವಿರುವ ಈ ಮಾಚೋಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಇಂತಹ ಬೇಜವಾಬ್ದಾರಿ ಕೃತ್ಯಗಳ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಪ್ರಬಲ ಆಗ್ರಹವಾಗಿದೆ.?

 ಮುಂದಿನ ಕ್ರಮ ಏನು ಬೇಕು?

ಉನ್ನತ ಮಟ್ಟದ ತನಿಖೆ: ರಾಷ್ಟ್ರ ಪಕ್ಷಿ ನವಿಲು ಸತ್ತಿದ್ದು ಹೇಗೆ? ಅದನ್ನು ಸುಡಲು ಆದೇಶ ನೀಡಿದವರು ಯಾರು? ಎಂಬ ಬಗ್ಗೆ ತನಿಖೆಯಾಗಬೇಕು.?

ಸಿಬ್ಬಂದಿಗಳ ಪುನರ್ವಿತರಣೆ: ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಸಿಬ್ಬಂದಿಗಳನ್ನು ಬದಲಿಸಿ, ಪರಿಸರ ಕಾಳಜಿಯುಳ್ಳವರನ್ನು ನೇಮಿಸಬೇಕು.?

ವೃಕ್ಷೋದ್ಯಾನದ ಅಭಿವೃದ್ಧಿ: ಮಾಚೋಹಳ್ಳಿ ವೃಕ್ಷೋದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಮತ್ತು ವನ್ಯಜೀವಿಗಳಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು.?

ಈ ವರದಿಯು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು “ಜನಜಾಗೃತಿ ವಾಯ್ಸ್” ಪತ್ರಿಕೆಯ ಆಗ್ರಹ .!

ಈ ದೃಶ್ಯಗಳನ್ನೆಲ್ಲ ಗಮನಿಸಿದ ಪ್ರತ್ಯಕ್ಷ ದರ್ಶಿ ಹಾಗೂ ವರದಿ: ಅಮಿತ್ ಗೋವಿಂದ್.

Spread the love

Leave a Reply

Your email address will not be published. Required fields are marked *