ನೆಲಮಂಗಲದಲ್ಲಿ ಮತ್ತೊಂದು ಜ್ಯುವೆಲರಿ ಶಾಪ್​ ದರೋಡೆ – ಗನ್ ತೋರಿಸಿ ಚಿನ್ನಾಭರಣ ದೋಚಿದ ಖತರ್ನಾಕ್ ಖದೀಮರು!

ಜನಜಾಗೃತಿ ವಾಯ್ಸ್ : ನೆಲಮಂಗಲದಲ್ಲಿ ಮತ್ತೊಂದು ಜ್ಯುವೆಲರಿ ಶಾಪ್​ ದರೋಡೆ – ಗನ್ ತೋರಿಸಿ ಚಿನ್ನಾಭರಣ ದೋಚಿದ ಖತರ್ನಾಕ್ ಖದೀಮರು!

ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ದಾಸನಪುರದಲ್ಲಿ ಹಾಡಹಗಲೇ ಜ್ಯುವೆಲರಿ ಶಾಪ್ ದರೋಡೆ ನಡೆದಿದೆ.

ದಾಸನಪುರ ಬಸ್ ನಿಲ್ದಾಣದ ಸಮೀಪವಿರುವ ರಾಮ್ ದೇವ್ ಜ್ಯುವೆಲರಿ ಶಾಪ್​ಗೆ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು, ಮಾಲೀಕ ಮಾಣಿಕ್ಯರಾಮ್ ಹಾಗೂ ಅವರ ಮಕ್ಕಳ ಮೇಲೆ ಗನ್ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ದರೋಡೆಕೋರರು ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ, ಕೆಲವೇ ನಿಮಿಷಗಳಲ್ಲಿ ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರಕ್ಕೂ ಅಧಿಕ ನಗದನ್ನು ದೋಚಿದ್ದಾರೆ. ಮಾಲೀಕರು ಚೇತರಿಸಿಕೊಳ್ಳುವಷ್ಟರಲ್ಲಿ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

Spread the love

Leave a Reply

Your email address will not be published. Required fields are marked *