ಜನಜಾಗೃತಿ ವಾಯ್ಸ್ : ರಾಮನಗರ; ಕಾಡಾನೆ ದಾಳಿಗೆ ಬೆಚ್ಚಿಬಿದ್ದ ಗ್ರಾಮಸ್ಥರು! ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ!
ರಾಮನಗರ: ರಾಮನಗರ ಜಿಲ್ಲೆಯ ಅರಣ್ಯ ಅಂಚಿನ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ರೈತ ಕಾಂತರಾಜು, ವಯಸ್ಸು 53 ಏಪ್ರಿಲ್ 19, ರಾತ್ರಿ ಸುಮಾರು 8.30ರಲ್ಲಿ, ಮಂಗಾಡಹಳ್ಳಿ ಗ್ರಾಮ, ವಿರೂಪಾಕ್ಷಪುರ ಹೋಬಳಿ, ಚನ್ನಪಟ್ಟಣ ತಾಲೂಕು, ರಾಮನಗರ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಸದರಿ ವ್ಯಕ್ತಿಯ ಮೇಲೆ ಆನೆ ದಾಳಿಯಿಂದ ವ್ಯಕ್ತಿ ಅಸ್ವಸ್ಥನಾಗಿದ್ದಾನೆ.

ಅವರು ತಮ್ಮ ಜಮೀನಿಗೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಏಕಾಏಕಿ ಎದುರಾದ ಕಾಡಾನೆ ವ್ಯಕ್ತಿಯ ಕರುಳು ಬಳ್ಳಿ ಆಚೆ ಬರುವಂತೆ, ದಾಳಿ ಮಾಡಿದ ಪರಿಣಾಮ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮಸ್ಥರು, ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ, ಬೇಸಿಗೆ ಇರುವುದರಿಂದ ಕಾಡಿಗೆಲ್ಲ ಬೆಂಕಿ ಬಿದ್ದು ತಿನ್ನಲು ಆಹಾರವಿಲ್ಲದೆ ಕೆರೆಕಟ್ಟೆಗಳಲ್ಲಿ ನೀರು ತುಂಬಿಸಿಲ್ಲ, ಆನೆಗಳು ಕುಡಿಯಲು ನೀರಿಲ್ಲದೆ ಊರಿನೊಳಗೆ ಬರುತ್ತಿವೆ, ರೈತರು ಬೆಳೆ ಬೆಳೆಯಲು ಕಷ್ಟವಾಗುತ್ತಿದೆ, ಎಷ್ಟು ಮನವಿ ನೀಡಿದರು ಪ್ರಯೋಜನ ಆಗುತ್ತಿಲ್ಲ ಇದಕ್ಕೆಲ್ಲಾ ನೇರವಾಗಿ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಕ್ಷ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ: ಮಂಜು ಎಂ.ಕೆ _ ರಾಮನಗರ ಜಿಲ್ಲಾ ವರದಿಗಾರರು.
