Manohar Ramaiah Lavanya : ಮನೋಹರ್ ರಾಮಯ್ಯ ಜೋತೆ ಹಸೆಮಣೆ ಏರಿದ ಹಳ್ಳಿ ಹುಡುಗಿ ಲಾವಣ್ಯ.

ಜನಜಾಗೃತಿ ವಾಯ್ಸ್ ಬೆಂಗಳೂರು : Manohar Ramaiah Lavanya : ಮನೋಹರ್ ರಾಮಯ್ಯ ಜೊತೆ ಸಪ್ತಪದಿ ತುಳಿದ ಹಳ್ಳಿ ಹುಡುಗಿ ಲಾವಣ್ಯ.

 

ಇಷ್ಟು ದಿನ ಮನೋಹರ್ ರಾಮಯ್ಯ ರವರು ಹೋದಲ್ಲಿ ಬಂದಲ್ಲಿ, ಸ್ನೇಹಿತರು, ಬಂಧುಗಳು, ಮಾಧ್ಯಮ ಮಿತ್ರರು, ಸಂಘಟನೆಯ ಮುಖಂಡರುಗಳು, ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದರು.

 

ಬೆಂಗಳೂರಿನ ಮಾಗಡಿ ರಸ್ತೆ ಮೂಲದ, ಜನಜಾಗೃತಿ ಸೇನಯ (ರಾಜ್ಯಾಧ್ಯಕ್ಷರು) ಹಾಗೂ (“ಜನಜಾಗೃತಿ ವಾಯ್ಸ್” ಕನ್ನಡ ಮಾಸಪತ್ರಿಕೆಯ (PRESS- MEDIA) ಪ್ರಧಾನ ಸಂಪಾದಕರಾದ),  ಮನೋಹರ್ ರಾಮಯ್ಯ ರವರು. (ಮೆಡಿಕಲ್ ಬಿ ಫಾರ್ಮಸಿ) ಓದಿಕೊಂಡಿರುವ ತುಮಕೂರಿನ ಹಳ್ಳಿ ಹುಡುಗಿ ಲಾವಣ್ಯ. ರವರ ಜೊತೆ ಇಂದು ವಿವಾಹವಾಗಿದ್ದಾರೆ. ಇವರ ಮದುವೆ ಬೆಂಗಳೂರಿನ ವಿದ್ಯಾರಣ್ಯಪುರ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ. 08 ಸೋಮವಾರ 2025, ರಂದು ನಡೆದಿದೆ. ಮನೋಹರ್ ರಾಮಯ್ಯ ಅವರು ತಾವು ಯಾವ ರೀತಿಯಲ್ಲಿ ಮದುವೆ ಆಗಬೇಕು ಎಂದು ಕನಸು ಕಂಡಿದ್ದರೋ ಅದೇ ರೀತಿಯಲ್ಲಿ ಮದುವೆ ಆಗಿದ್ದಾರೆ.

Manohar Ramaiah Lavanya

ಇಷ್ಟು ದಿನ ಮನೋಹರ್ ರಾಮಯ್ಯ ರವರು, ಹೋದಲ್ಲಿ ಬಂದಲ್ಲಿ ಅವರ ಸ್ನೇಹಿತರು, ಬಂಧುಗಳು, ಮಾಧ್ಯಮ ಮಿತ್ರರು, ಸಂಘಟನೆಯ ಮುಖಂಡರುಗಳು, ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದರು. ಸೂಕ್ತ ಹುಡುಗಿ ಸಿಕ್ಕಿದಾಗ ಎಂದು ನಗುತ್ತಲೇ ಉತ್ತರಿಸುತ್ತಿದ್ದ ಮನೋಹರ್ ರಾಮಯ್ಯ ರವರು, ಕೊನೆಗೂ ಲಾವಣ್ಯ ಎಂಬುವವರ ಜೊತೆ ವಿವಾಹವಾಗಿದ್ದಾರೆ.

 

Manohar Ramaiah Lavanya

 

ರಾಜ್ಯಾಧ್ಯಕ್ಷ ಮನೋಹರ್ ರಾಮಯ್ಯ ಹಾಗೂ ಲಾವಣ್ಯ​, ಇವರು ಅದ್ಧೂರಿ ಮದುವೆಯಾಗದೆ, ಯಾವುದೇ ಆಡಂಬರ ದುಂದು ವೆಚ್ಚವಿಲ್ಲದೆ, ಮದುವೆಗಾಗಿ ಲಕ್ಷ ಲಕ್ಷ ಸಾಲಮಾಡಿಕೊಂಡು ವಿವಾಹ ಮಾಡಿಕೊಳ್ಳುವವರಿಗೆ ಇವರು ಸರಳವಾಗಿ ವಿವಾಹ ಮಾಡಿಕೊಳ್ಳುವ ಮೂಲಕ ಇಂದಿನ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ, ಸ್ನೇಹಿತರು, ಬಂಧುಗಳು, ಪತ್ರಿಕಾ ತಂಡದವರು, ಸಂಘಟನೆಯ ಮುಖಂಡರುಗಳು, ಸೇರಿದಂತೆ ಸಾಕಷ್ಟು, ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ.

 

Manohar Ramaiah Lavanya

 

ತಾಳಿ ಕಟ್ಟುವ ವೇಳೆ ಭಾವುಕ.

ಶಾಲಾ-ಕಾಲೇಜು ದಿನಗಳಲ್ಲಿ ಕಷ್ಟದಲ್ಲಿ ಜೀವನ ಸಾಗಿಸಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಬೆಂಗಳೂರಿಗೆ ಬಂದು ಸ್ವಂತ ಮಾಧ್ಯಮ ಸ್ಥಾಪಿಸಿ (PRESS MEDIA), ಸಂಘಟನೆಗಳಲ್ಲಿ,  ಕಷ್ಟಪಟ್ಟು ವೃತ್ತಿ ಕಂಡುಕೊಂಡು ಇಂದು ದೋಡ್ಡ ಸ್ಥಾನಕ್ಕೆ ಬೆಳೆದು ನಿಂತಿರುವ ಮನೋಹರ್ ರಾಮಯ್ಯ ರವರ ವೈಯಕ್ತಿಕ ಜೀವನದಲ್ಲಿ ತಮ್ಮ ತಂದೆ-ತಾಯಿ ಮತ್ತು ಅಣ್ಣನ ಜವಾಬ್ದಾರಿ ವಹಿಸಿಕೊಂಡಿದ್ದರು. ಇಷ್ಟು ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಜವಾಬ್ದಾರಿಗಳನ್ನು ನಿರ್ವಹಿಸಿ ಮದುವೆಯಾಗುವ ವೇಳೆ ಮನೋಹರ್ ರಾಮಯ್ಯ ರವರು ಭಾವುಕರಾಗಿದ್ದು ಕಂಡುಬಂತು.

 

Manohar Ramaiah Lavanya
Spread the love

Leave a Reply

Your email address will not be published. Required fields are marked *