ಜನಜಾಗೃತಿ ವಾಯ್ಸ್ : ಹಣ ಡಬಲಿಂಗ್ ಮಾಡೋದಾಗಿ ಲಕ್ಷ ಲಕ್ಷ ಪಂಗನಾಮ, ಸ್ನೇಹಿತನನ್ನೇ ಯಾಮಾರಿಸಿ 86 ಲಕ್ಷ ಉಂಡೆನಾಮ ಹಾಕಿದ ಐನಾತಿ ಗೆಳೆಯ.
ನಾಲ್ಕು ವರ್ಷದ ಕುಚುಕು ಗೆಳೆಯನಿಂದ ನಂಬಿಕೆ ದ್ರೋಹ. ಬೆಂಗಳೂರಿನ ನಾಗರಭಾವಿ ನಿವಾಸಿ ಹರೀಶ್ ಎಂಬಾತನಿಂದ ವಂಚನೆ. ಎಂಜೆಲ್ ಬ್ರೋಕಿಂಗ್ ಟ್ರೇಡಿಂಗ್ ಕಂಪನಿಯಲಿ ಕೆಲಸ ಮಾಡ್ತಿರೋದಾಗಿ ಹೇಳಿದ್ದ ವಂಚಕ ಹರೀಶ್. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಹಣ ಕೊಡೊದಾಗಿ ಪುಂಗಿ ಬಿಟ್ಟಿದ್ದ. ಸ್ನೇಹಿತನ ಮಾತು ನಂಬಿ ಮೊದಲಿಗೆ 2 ಲಕ್ಷ ಹಣ ಹೂಡಿಕೆ ಮಾಡಿದ್ದ ಚಂದ್ರಶೇಖರ್.. ಕಳೆದ ಎರಡು ವರ್ಷದ ಹಿಂದೆ ಸತತ ಮೂರು ತಿಂಗಳು ಆರು ಲಕ್ಷ ಹೂಡಿಕೆ ಮಾಡಿದ್ದ ಚಂದ್ರಶೇಖರ್. ನಂತರ ಹೂಡಿಕೆಯ ಹಣದ ಲಾಭಾಂಶ ನೀಡಿದ್ದ ವಂಚಕ ಹರೀಶ್.

ಇದನ್ನ ನಂಬಿದ ಚಂದ್ರಶೇಖರ್, ತನ್ನ ಹೆಂಡತಿ ಹಾಗು ಸ್ನೇಹಿತರ ಬಳಿ ಸಾಲ ಮಾಡಿದ್ರು. ಬರೋಬ್ಬರಿ 66 ಲಕ್ಷ ಹಣ ಸಾಲ ಪಡೆದು ಎಂಜೆಲ್ ನ್ರೋಕಿಂಗ್ ಕಂಪನಿಗೆ ಹೂಡಿಕೆ ಮಾಡಿದ್ದಾರೆ. ಇನ್ನು ಆರ್.ಟಿ.ಜಿ.ಎಸ್ ಮೂಲಕ 35 ಲಕ್ಷ ಹಣ ವರ್ಗಾವಣೆ ಮಾಡಿದ್ದ ದೂರುದಾರ. ನಂತರ 31 ಲಕ್ಷ ಹಣವನ್ನ ಬ್ಯಾಂಕ್, ಫೋನ್ ಪೇ, ಗೂಗಲ್ ಪೇ ಮೂಲಕ ವರ್ಗಾವಣೆ.

ಅಲ್ಲದೆ ನಗದು ರೂಪದಲ್ಲಿ ಬರೋಬ್ಬರಿ 20 ಲಕ್ಷ ಹಣ ನೀಡಿದ್ದ ಚಂದ್ರಶೇಖರ್. ಕೆಂಗೇರಿ ಬಳಿಯ ಅಂಚಿಪಾಳ್ಯದ ಶ್ರೀನಿಧಿ ಹೋಟೆಲ್ ನಲ್ಲಿ 20 ಲಕ್ಷ ನಗದು ಹಣ ನೀಡಿದ್ದ ದೂರುದಾರ. ಜೂನ್ 2024 ರಲ್ಲಿ ಹಂತ ಹಂತವಾಗಿ 86 ಲಕ್ಷ ಹಣವನ್ನು ಕೊಟ್ಟಿದ್ದು ದೂರುದಾರ. ಅದರ ಲಾಭಾಂಶ ಸೇರಿ 1.15 ಕೋಟಿ ಕೊಡೊದಾಗಿ ಹೇಳಿದ್ದ ವಂಚಕ ಹರೀಶ್. ಕೆಲ ದಿನದ ನಂತರ ಅಸಲಿ ಆಟ ಶುರುಮಾಟಿದ್ದ ಐನಾತಿ ಹರೀಶ್.

ಕಮಿಷನ್ ವಿಷಯದಲ್ಲಿ ಸ್ವಲ್ಪ ಪ್ರಾಂ ಇದೆ ಸ್ವಲ್ಪ ಸಮಯ ಕೊಡಿ ಅಂತ ಪುಂಗಿದ್ದ. ಹಣ ಕೇಳಿದಾಗ ಸಬೂಬು ಹೇಳಿಕೊಂಡು ಮುಂದಕ್ಕೆ ಹಾಕುತ್ತಿದ್ದ ವಂಚಕ. ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಕಾಲಿ ಮಾಡಿಕೊಂಡು ಪರಾರಿಯಾಗಿದ್ದ. ಮೋಸ ಹೋದ ವಿಚಾರ ಗೊತ್ತಾಗ್ತಿದ್ದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಚಂದ್ರಶೇಖರ್. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಹರೀಶ್ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು. ಸದ್ಯ ಆರು ತಿಂಗಳ ಬಳಿಕ ಆರೋಪಿಯನ್ನ ಬಂಧಿಸಿರೋ ಕುಂಬಳಗೋಡು ಪೊಲೀಸರು. ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ಅಲ್ಲದೆ ಮತ್ತಷ್ಟು ಜನರಿಗೆ ಹೀಗೆ ವಂಚನೆ ಮಾಡಿರೋ ಅನುಮಾನದ ಮೇಲೆ ತನಿಖೆ ಮುಂದುವರಿಕೆ.!
