ಜನಜಾಗೃತಿ ವಾಯ್ಸ್ : ಕಪ್ಪು ಕೋಟ್ ಧರಿಸಿ ಕೋರ್ಟ್‌ನಲ್ಲೇ ವಂಚನೆ, ಅಸಲಿ ವಕೀಲರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ನಕಲಿ ವಕೀಲ.!

ಜನಜಾಗೃತಿ ವಾಯ್ಸ್ : ಕಪ್ಪು ಕೋಟ್ ಧರಿಸಿ ಕೋರ್ಟ್‌ನಲ್ಲೇ ವಂಚನೆ – ಅಸಲಿ ವಕೀಲರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ನಕಲಿ ವಕೀಲ!

ಕಪ್ಪು ಕೋಟ್ ಧರಿಸಿ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುತ್ತಿದ್ದ ನಕಲಿ ವಕೀಲನೊಬ್ಬನ ಬಣ್ಣ ಈಗ ಬಯಲಾಗಿದೆ. ಅಸಲಿ ವಕೀಲರಂತೆ ಪೋಸ್ ನೀಡುತ್ತಾ ಕಕ್ಷೀದಾರರಿಗೆ ಮೋಸ ಮಾಡುತ್ತಿದ್ದ ವಾಮನ್ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ.

 

ಆನೇಕಲ್‌ನಲ್ಲಿ ಲೋಕಾಯುಕ್ತ ವಕೀಲನೆಂದು ಸಾರ್ವಜನಿಕರನ್ನು ನಂಬಿಸಿದ್ದ ವಾಮನ್, ಇತ್ತೀಚೆಗೆ ಉಪವಿಭಾಗಾಧಿಕಾರಿಗಳ (AC) ನ್ಯಾಯಾಲಯದಲ್ಲಿ ಕಪ್ಪು ಕೋಟ್ ಧರಿಸಿ ಕಕ್ಷಿದಾರರ ಪರ ವಾದ ಮಂಡಿಸಲು ಮುಂದಾಗಿದ್ದ.

 

ಕೋರ್ಟ್ ಕಲಾಪದ ವೇಳೆ ವಾಮನ್‌ನ ವಾದ ವೈಖರಿ ಕಂಡು ಅನುಮಾನಗೊಂಡ ವಕೀಲರು ಆತನನ್ನು ವಿಚಾರಿಸಿದಾಗ, ಯಾವುದೇ ಕಾನೂನು ಪದವಿ ಅಥವಾ ನೋಂದಣಿ ಇಲ್ಲದ ನಕಲಿ ವಕೀಲನೆಂಬುದು ಪತ್ತೆಯಾಗಿದೆ.

 

ಈ ಸಂಬಂಧ ಆನೇಕಲ್ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್ ಕುಮಾರ್ ಅವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ವಕೀಲ ವೃತ್ತಿಗೆ ಕಳಂಕ ತರುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ವಾಮನ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

Spread the love

Leave a Reply

Your email address will not be published. Required fields are marked *