ಜನಜಾಗೃತಿ ವಾಯ್ಸ್ : “ಬಡವರ ಧ್ವನಿ, ನ್ಯಾಯಾಲಯದ ಸಿಂಹಸ್ವಪ್ನ ವಕೀಲ ರಾಮೇಗೌಡ ಅವರಿಗೆ ಹುಟ್ಟುಹಬ್ಬದ ಸಂಭ್ರಮ: ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿ ಆಚರಣೆ”

ಜನಜಾಗೃತಿ ವಾಯ್ಸ್ ನೆಲಮಂಗಲ: ವೃತ್ತಿಯಲ್ಲಿ ವಕೀಲರಾಗಿ, ಹಲವಾರು ಜನರಿಗೆ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಾ, ಕಾನೂನಿನ ಮೂಲಕವೇ ಜನಸೇವೆ ಮಾಡುವುದನ್ನು ತಮ್ಮ ಕಾಯಕವಾಗಿಸಿಕೊಂಡಿರುವ ಜನಪ್ರಿಯ ವಕೀಲರಾದ ರಾಮೇಗೌಡ ಅವರು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ತಮ್ಮ ನೆಚ್ಚಿನ ವಕೀಲರ ಜನ್ಮದಿನದ ಪ್ರಯುಕ್ತ ಅವರ ಸ್ನೇಹಿತರು, ಹಿತೈಷಿಗಳು ಹಾಗೂ ಕುಟುಂಬದವರು ಸಮ್ಮುಖರಾಗಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸದ್ಯ ರಾಮೇಗೌಡ ಅವರು ತಮ್ಮ ಹೆಂಡತಿ, ಮಕ್ಕಳು ಮತ್ತು ಅಪಾರ ಸ್ನೇಹಿತರ ಬಳಗದೊಂದಿಗೆ ಜನ್ಮದಿನದ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.

ಬಡವರ ಧ್ವನಿಯಾಗಿ, ಕಾನೂನು ನೆರವು ನೀಡುತ್ತಾ ಸಮಾಜದಲ್ಲಿ ಸದಾ ಮುಂಚೂಣಿಯಲ್ಲಿರುವ ರಾಮೇಗೌಡ ಅವರಿಗೆ ಸ್ನೇಹಿತರು, ಗಣ್ಯರು ಹಾಗೂ ಸಾರ್ವಜನಿಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸದಾ ಜನಸೇವೆಯಲ್ಲಿ ತೊಡಗಿರುವ ಜನಪ್ರಿಯ ವಕೀಲರಾದ ರಾಮೇಗೌಡ ಅವರಿಗೆ ‘ಜನಜಾಗೃತಿ ವಾಯ್ಸ್’ ಪತ್ರಿಕೆಯ ವತಿಯಿಂದ ಹುಟ್ಟುಹಬ್ಬದ ಅನಂತಾನಂತ ಶುಭಾಶಯಗಳು. ಇವರಿಗೆ ಆಯುಷ್ಯ, ಆರೋಗ್ಯ ಮತ್ತು ವೃತ್ತಿಜೀವನದಲ್ಲಿ ಇನ್ನಷ್ಟು ಉನ್ನತ ಯಶಸ್ಸು ಸಿಗಲಿ ಎಂದು ಪತ್ರಿಕಾ ಬಳಗ ಹಾರೈಸುತ್ತದೆ.”
ವರದಿ: ಮನೋಹರ್ ರಾಮಯ್ಯ _ಸಂಪಾದಕರು
