ಜೆಡಿಎಸ್ ಯುವ ನಾಯಕ ಹಾಗೂ ಪದ್ಮಪ್ರಿಯ ಗ್ರೂಪ್ಸ್ ಮಾಲೀಕರಾದ ವಿಜ್ಞೇಶ್ ಗೌಡರಿಗೆ ಜನ್ಮದಿನ ಸಂಭ್ರಮ.

ಜನಜಾಗೃತಿ ವಾಯ್ಸ್ : ಜೆಡಿಎಸ್ ಯುವ ನಾಯಕ ಹಾಗೂ ಪದ್ಮಪ್ರಿಯ ಗ್ರೂಪ್ಸ್ ಮಾಲೀಕರಾದ ವಿಜ್ಞೇಶ್ ಗೌಡರಿಗೆ ಜನ್ಮದಿನ ಸಂಭ್ರಮ.

ಮೈಸೂರು: ಜೆಡಿಎಸ್ ಯುವ ನಾಯಕ ಹಾಗೂ ಪದ್ಮಪ್ರಿಯ ಗ್ರೂಪ್ಸ್‌ನ ಮಾಲೀಕರಾದ ವಿಜ್ಞೇಶ್ ಗೌಡ ಅವರ ಜನ್ಮದಿನವನ್ನು ಅವರ ಕಚೇರಿಯಲ್ಲಿ ಸ್ನೇಹಿತರು, ಮುಖಂಡರುಗಳ ಸಮ್ಮುಖದಲ್ಲಿ ಆಚರಿಸಿದರು.

ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಮುಖಂಡರು ಹಾಗೂ ಸ್ನೇಹಿತರು ವಿಜ್ಞೇಶ್ ಗೌಡ ಅವರಿಗೆ ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ ಶುಭಾಶಯ ಕೋರಿದರು. ಅವರು ಸಮಾಜಸೇವೆ, ಯುವಕರ ಸಂಘಟನೆ ಹಾಗೂ ಜನಪರ ಕಾರ್ಯಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಿ, ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಉಜ್ವಲ ರಾಜಕೀಯ ಭವಿಷ್ಯ ಹೊಂದಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಭರತ್ (ಯೂತ್ ಕಾಂಗ್ರೆಸ್ ಲೀಡರ್), ರಾಘವೇಂದ್ರ (ಜೆಡಿಎಸ್ ಲೀಡರ್), ಗಿರೀಶ್ (ಜೆಡಿಎಸ್ ಮುಖಂಡರು), ಶ್ರೀಕಂಠ (ಪ್ರೊಫೆಸರ್), ಆದರ್ಶ, ಅಭಿ, ಮಾದೇವ, ಹರೀಶ್, ವಿಜಯ್, ಪುನೀತ್, ಪ್ರಕಾಶ್, ಮಹೇಶ್, ಚಂದ್ರು ಸೇರಿದಂತೆ ಅನೇಕ ಮುಖಂಡರು, ಸ್ನೇಹಿತರು ಉಪಸ್ಥಿತರಿದ್ದು, ವಿಜ್ಞೇಶ್ ಗೌಡ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.

ಕಾರ್ಯಕ್ರಮವು ಆತ್ಮೀಯ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು

ವರದಿ: ಮನೋಜ್ ಕಾರ್ತಿಕ್                                       -ಮೈಸೂರು ಜಿಲ್ಲೆ ಉಪ ಸಂಪಾದಕರು.

Spread the love

Leave a Reply

Your email address will not be published. Required fields are marked *