ಜನಜಾಗೃತಿ ವಾಯ್ಸ್ ಗೆ ಕಾನೂನು ಬಲ: ಹಿರಿಯ ವಕೀಲರು ಪಿ.ಜಿ ರಜತ್ ಗೌಡ ಕಾನೂನು ಸಲಹೆಗಾರರಾಗಿ ಸೇರ್ಪಡೆ.
ಜನಜಾಗೃತಿ ವಾಯ್ಸ್ ಬೆಂಗಳೂರು, ಜು. 27: ಜನಪರ ಹೋರಾಟಗಳು, ಸಾಮಾಜಿಕ ಕಾಳಜಿ ಹಾಗೂ ನಿಷ್ಪಕ್ಷಪಾತ ಸುದ್ದಿಗಳ ಮೂಲಕ ಜನರ ವಿಶ್ವಾಸ ಗಳಿಸಿರುವ ಜನಜಾಗೃತಿ ವಾಯ್ಸ್ ಪತ್ರಿಕೆಗೆ ಮತ್ತೊಂದು ಮಹತ್ವದ ಬಲ ಸೇರ್ಪಡೆಯಾಗಿದೆ. ಖ್ಯಾತ ವಕೀಲರಾದ ಪಿ.ಜಿ ರಜತ್ ಗೌಡ ಅವರು ಇನ್ನುಮುಂದೆ ಜನಜಾಗೃತಿ ವಾಯ್ಸ್ ಪತ್ರಿಕೆಯ ಕಾನೂನು ಸಲಹೆಗಾರ (Legal Advisor) ಆಗಿ ಅಧಿಕೃತವಾಗಿ ಕೈಜೋಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನ ಸಂಪಾದಕರಾದ ಮನೋಹರ್ ರಾಮಯ್ಯ ಅವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಪತ್ರಿಕೆಯ ಮುಂದಿನ ಬೆಳವಣಿಗೆ, ಕಾನೂನು ಜಾಗೃತಿ, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರಿಗೆ ಉಚಿತ ಕಾನೂನು ಮಾರ್ಗದರ್ಶನ ನೀಡುವ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಅಡ್ವಕೇಟ್ ಪಿ.ಜಿ ರಜತ್ ಗೌಡ ಅವರು,
“ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ನನ್ನ 19 ವರ್ಷಗಳ ವಕೀಲ ವೃತ್ತಿಯಲ್ಲಿ ಸಾವಿರಾರು ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಿದ್ದೇನೆ. ಸಮಾಜ ಸೇವೆಯನ್ನೂ ನಿರಂತರವಾಗಿ ನಡೆಸಿದ್ದೇನೆ. ನನ್ನ ಕಾನೂನು ಸಲಹೆ ಮತ್ತು ಮಾರ್ಗದರ್ಶನ ಹೇಗಿರುತ್ತದೆ ಎಂಬುದನ್ನು ನೀವೇ ಮುಂದಿನ ದಿನಗಳಲ್ಲಿ ಕಾಣುತ್ತೀರಿ. ಜನಜಾಗೃತಿ ವಾಯ್ಸ್ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ನನ್ನ ಸಂಪೂರ್ಣ ಸಹಕಾರ ಮತ್ತು ಕಾನೂನು ಬೆಂಬಲ ಸದಾ ಇರುತ್ತದೆ,” ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಪ್ರಧಾನ ಸಂಪಾದಕರಾದ ಮನೋಹರ್ ರಾಮಯ್ಯ ಅವರು ಮಾತನಾಡಿ, ಪತ್ರಿಕೆಯ ಬೆಳವಣಿಗೆಯ ಪಯಣದಲ್ಲಿ ಅನುಭವಿ ಕಾನೂನು ತಜ್ಞರ ಸೇರ್ಪಡೆ ಹೊಸ ಶಕ್ತಿ ತುಂಬಿದ್ದು, ಸಾರ್ವಜನಿಕ ಹಿತಾಸಕ್ತಿ, ನ್ಯಾಯ ಮತ್ತು ಸತ್ಯದ ಪರವಾಗಿ ಜನಜಾಗೃತಿ ವಾಯ್ಸ್ ಇನ್ನಷ್ಟು ದೃಢವಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಜಾಗೃತಿ ವಾಯ್ಸ್ ಕುಟುಂಬವು ಅಡ್ವೋಕೇಟ್ ಪಿ.ಜಿ ರಜತ್ ಗೌಡ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರ ಸೇವೆ ಹಾಗೂ ಮಾರ್ಗದರ್ಶನ ಪತ್ರಿಕೆಯ ಬೆಳವಣಿಗೆಗೆ ಹೊಸ ಆಯಾಮ ನೀಡಲಿದೆ ಎಂದು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿತು.
“ಸತ್ಯದ ಪರ ಧ್ವನಿ – ಸಮಾಜದ ಪರ ಹೋರಾಟ” ಎಂಬ ಧ್ಯೇಯದೊಂದಿಗೆ ಸಾಗುತ್ತಿರುವ ಜನಜಾಗೃತಿ ವಾಯ್ಸ್ ತಂಡಕ್ಕೆ ರಜತ್ ಗೌಡ ಅವರ ಸೇರ್ಪಡೆ ಹೊಸ ಉತ್ಸಾಹ ಹಾಗೂ ಕಾನೂನುಬದ್ಧ ಶಕ್ತಿಯನ್ನು ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

