ಜನಜಾಗೃತಿ ವಾಯ್ಸ್ :ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿ ಲಾಕ್.
ಕುತೂಹಲಕ್ಕೆ ಬೋನಿನೊಳಗೆ ಹೋಗಿ ಬಂಧಿಯಾಗಿದ್ದ ವ್ಯಕ್ತಿ.

ಚಾಮರಾಜನಗರ ತಾಲೋಕು ಗಂಗವಾಡಿ ಗ್ರಾಮದಲ್ಲಿ ಘಟನೆ.
3 ಗಂಟೆಗು ಹೆಚ್ಚು ಕಾಲ ಬೋನಿನೊಳಗೆ ಸಿಲುಕಿದ್ದ ಗ್ರಾಮದ ಕಿಟ್ಟಿ.

ಮೂರು ಹಸುಗಳನ್ನು ಕೊಂದು ಹಾಕಿದ್ದ ಚಿರತೆ.
ಚಿರತೆ ಸೆರೆಗೆ ರುದ್ರ ಎಂಬುವರ ಜಮೀನಿನಲ್ಲಿ ಬೋನು ಇಟ್ಟಿದ್ಧ ಅರಣ್ಯ ಇಲಾಖೆ.

ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನ ಒಳಹೊಕ್ಕಿದ್ದ ಕಿಟ್ಟಿ.
ಈ ವೇಳೆ ಆಟೋಮ್ಯಾಟಿಕ್ ಆಗಿ ಮುಚ್ಚಿಕೊಂಡ ಬೋನಿನ ಬಾಗಿಲು.
ಬೋನಿನೊಳಗೆ ಬಂಧಿಯಾಗಿ ಪೇಚಿಗೆ ಸಿಲುಕಿದ ಕಿಟ್ಟಿ.

ಬೋನಿನ ಬಾಗಿಲು ತೆರೆಯಲು ಯತ್ನಿಸಿ ವಿಫಲ.
ಬಳಿಕ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡ ಕಿಟ್ಟಿ.

ಕಿಟ್ಟಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದು ಕಿಟ್ಟಿಯನ್ನು ಬಂಧಮುಕ್ತಗೊಳಿಸಿದ ರೈತರು
