ಜನಜಾಗೃತಿ ವಾಯ್ಸ್ : ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಡಾ. ಅಂಬರೀಶ್ ಸೇವೆ, ಗಿನ್ನಿಸ್ ರೆಕಾರ್ಡ್ ಬರೆದ ಕನ್ನಡಿಗ.
ಜನಜಾಗೃತಿ ವಾಯ್ಸ್ ಬೆಂಗಳೂರು: ಬಡವರ ಬಂಧು, ಸಮಾಜ ಸೇವಕ ಡಾ. ಅಂಬರೀಶ್ ಅವರು ಇದೀಗ ಸಮಾಜ ಸೇವೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅಪ್ರತಿಮ ಸಮಾಜ ಸೇವೆಯನ್ನು ಗುರುತಿಸಿ, ಗಿನ್ನಿಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮೂಲಕ ಅವರು ಕನ್ನಡ ನಾಡಿಗೆ ಅಪಾರ ಕೀರ್ತಿ ತಂದುಕೊಟ್ಟಿದ್ದಾರೆ.

ಡಾ. ಅಂಬರೀಶ್ ಅವರು ಕಳೆದ ಹಲವು ವರ್ಷಗಳಿಂದಲೂ ರಾಜಕೀಯ ಮತ್ತು ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿಶೇಷವಾಗಿ ಬಡವರು, ಶೋಷಿತರು ಮತ್ತು ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ವೈಯಕ್ತಿಕವಾಗಿ ಹಾಗೂ ಸಂಸ್ಥೆಗಳ ಮೂಲಕ ನೆರವು ನೀಡುತ್ತಾ ಬಂದಿದ್ದಾರೆ. ಅವರ ಈ ಮಾನವೀಯ ಕಾರ್ಯಗಳು ಇಂದು ಗಿನ್ನಿಸ್ ದಾಖಲೆಯ ಮೆರಗು ಪಡೆದಿದ್ದು, ಸಮಾಜಕ್ಕೆ ದೊಡ್ಡ ಮಾದರಿಯಾಗಿ ನಿಂತಿವೆ.
”ಡಾ.ಅಂಬರೀಶ್ ಅವರ ಈ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿದಾಯಕ. ಸಮಾಜ ಸೇವೆಯಲ್ಲಿ ಅವರು ತೋರಿರುವ ಅಪಾರ ಕಾಳಜಿ ಮತ್ತು ಬದ್ಧತೆ ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಅನುಕರಣೀಯ,” ಎಂದು ಹಲವು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಮಹಾನ್ ಸಾಧನೆಯನ್ನು ಪರಿಗಣಿಸಿ, ‘ಜನಜಾಗೃತಿ ವಾಯ್ಸ್’ ಪತ್ರಿಕೆಯ ಗೌರವ ಸಲಹೆಗಾರರಾದ ಡಾ. ಅಂಬರೀಶ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಕನ್ನಡದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿರುವ ಅಂಬರೀಶ್ ಅವರ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ದೇವರು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತದೆ.

